ದೇಹಾವಕಾಶಗಳು ಅಥವಾ ಶರೀರ ಕುಹರ -
ಬಹುಕೋಶಿ ಜೀವಿಗಳಲ್ಲಿ ಕೋಶಗಳು ಪದರಗಳಾಗಿ ರೂಪುಗೊಂಡಿವೆ. ಈ ಪದರಗಳಿಂದ ದೇಹವು ಹೊರಭಾಗದಲ್ಲಿ ಸಂಪೂರ್ಣವಾಗಿ ಹರಡಿ ರಕ್ಷಣಾ ಕವಚವಾಗಿದೆ. ಈ ರಕ್ಷಣಾ ಕವಚವೇ ದೇಹ ಬಿತ್ತಿ. ಈ ದೇಹ ಬಿತ್ತಿಯಲ್ಲಿ ಜೀವಿಯ ಕಾರ್ಯ ಚಟುವಟಿಕೆಗಳಿಗೆ ಬೇಕಾದ ಅಂಗ ವ್ಯವಸ್ಥೆ, ಅಂಗ ಮತ್ತು ಅಂಗಾಂಶಗಳು ಸಮರ್ಪಕವಾಗಿ ಜೋಡಣೆಯಾಗಿದೆ. ದೇಹ ಭಿತ್ತಿಯ ಒಳಗೆ ಈ ಅಂಗವ್ಯವಸ್ಥೆಯ ಏರ್ಪಟ್ಟಿರುವುದು ಒಂದು ಕುಹರ ಅಥವಾ ದೇಹಾವಕಾಶದಲ್ಲಿ. ಇದು ಒಂದು ಕೊಳವೆಯಲ್ಲಿರುವಂತೆ ಗಾಳಿ ತುಂಬಿದ ಖಾಲಿ ಜಾಗವಲ್ಲ, ಇಲ್ಲಿ ಜೀವಿಗಳ ಜೀವಕೋಶಗಳನ್ನು ಸದಾ ತಣಿಸುವ ಹಾಗೂ ಶರೀರದ ಕಾರ್ಯಗಳನ್ನು ಸಮತೋಲನದಲ್ಲಿಡಲು ಸಹಾಯಕವಾದ ದ್ರವ್ಯವಿದೆ. ಈ ಕುಹರವು ಎಲ್ಲಾ ಜೀವಿಗಳಲ್ಲೂ ಒಂದೇ ತೆರನಾಗಿಲ್ಲ. ಅವು ಜೀವಿ ವಿಕಾಸದ ಹಾದಿಯಲ್ಲಿ ಅನೇಕ ಮಾರ್ಪಾಟುಗಳನ್ನು ತೋರುತ್ತವೆ. 	

	ಸ್ಪಂಜುಗಳು ಹಾಗೂ ಕುಟುಕು ಕಣವಂತಗಳಲ್ಲಿ ದೇಹಭಿತ್ತಿಯ ಹೊರಪದರ  (ಇಛಿಣಡಿoಜeಡಿm)  ಮತ್ತು ಅದಕ್ಕೆ ಹೊಂದಿಕೊಂಡ ಅಥವಾ ಅಂಟಿಕೊಂಡ ಒಳಪದರ (ಇಟಿಜoಜeಡಿm) ಗಳಿಂದಾಗಿದೆ. ಹೀಗೆ ಎರಡು ಪದರಗಳಿರುವ ಜೀವಿಗಳನ್ನು ಇಪ್ಪದರ ಜೀವಿಗಳೆನ್ನಬಹುದು. ಎಂದರೆ ಈ ಜೀವಿಗಳು ಒಂದು ಸಾಧಾರಣ ಚೀಲ ಅಥವಾ ಕೊಳವೆಯಂತಾಗಿದೆ. ಚೀಲ ಅಥವಾ ಕೊಳವೆಯ ಕುಹರವೇ ಶರೀರ ಕುಹರ. ಸ್ಪಂಜುಗಳಲ್ಲಿ ಈ ಕುಹರವನ್ನು ಸ್ಪಾಂಗೋಸೀಲ್ (Sಠಿoಟಿgoಛಿoಟ) ಎಂದು ಹೆಸರಿಸಿದರೆ ಕುಟುಕು ಕಣವಂತಗಳಲ್ಲಿ ಸೇಲೆಂಟಿರಾನ್ (ಅoeಟeಟಿಣeಡಿoಟಿ) ಎಂದು ಕರೆಯಲಾಗಿದೆ. ಇಲ್ಲಿ ಛಿoeಟ=ಕುಹರ, eಟಿಣeಡಿoಟಿ=ಆಹಾರ ಕೊಳವೆ ಎಂದಾಗುತ್ತದೆ. ಇದರ ಪರ್ಯಾಯ ಪದ ಉಚಿsಣಡಿo-vಚಿsಛಿuಟಚಿಡಿ ಛಿಚಿviಣಥಿ ಉಚಿsಡಿಣo=ಜಠರ, vಚಿsಛಿuಟಚಿಡಿ=ಪರಿಚಲನಾ, ಛಿಚಿviಣಥಿ=ಕುಹರ ಎಂದು ಅರ್ಥೈಸಬಹುದು. ಈ ಕುಹರವು ಜಠರದಂತೆ ಆಹಾರವನ್ನು ಸಂಗ್ರಹಿಸುವುದೇ ಅಲ್ಲದೇ, ಇಲ್ಲಿ ಪಚನಕಾರ್ಯವೂ ನಡೆದು, ಪಚನಗೊಂಡ ಆಹಾರವೂ ದೇಹದ ಎಲ್ಲಾ ಭಾಗಗಳಿಗೂ ಹೀರಲ್ಪಡುವುದರಿಂದ ಇದು ಜಠರ ಮತ್ತು ಸಾಗಣೆಯ ಕಾರ್ಯಗಳೆರಡನ್ನೂ ನಿರ್ವಹಿಸುವ ಕುಳಿ ಎನ್ನಬಹುದು.

	ಇಪ್ಪದರದ (ಆiಠಿಟobಟಚಿsಣiಛಿ) ಜೀವಿಗಳಿಂದ ಮುಪ್ಪುದರ (ಖಿಡಿiಠಿಟobಟಚಿsಣiಛಿ) ಜೀವಿಗಳು ವಿಕಾಸಗೊಂಡಿದೆ. ಮುಪ್ಪುದರ ಜೀವಿಗಳ ಶರೀರದಲ್ಲಿ ಮೂರು ಮುಖ್ಯ ಕೋಶಪದರಗಳಿವೆ. ಅವೇ, ಹೊರಪದರ (ಇಛಿಣoಜeಡಿm), ಮಧ್ಯಪದರ (mesoಜeಡಿm) ಮತ್ತು ಒಳಪದರ (ಇಟಿಜoಜಡಿem).
ಸ್ಪಂಜುಗಳಿಗೆ ಹೋಲಿಸಿದರೆ ಮಣ್ಣುಹುಳುವಿನ ಶರೀರ ರಚನೆ ಒಂದು ಕೊಳವೆಯೊಳಗೆ ಮತ್ತೊಂದನ್ನು ಕೂರಿಸಿದಂತೆ ಕಾಣುತ್ತದೆ. ಹೊರಕೊಳವೆಯನ್ನು ದೇಹದ ಹೊರಭಿತ್ತಿ ಎಂದು ಊಹಿಸಿ, ಕೂರಿಸಿದ ಒಳಕೊಳವೆಯನ್ನು ಅದರ ಆಹಾರನಾಳ ಎಂದು ಅರ್ಥೈಸಿ ಹೊರ ದೇಹ ಭಿತ್ತಿಯೇ ಇಛಿಣoಜeಡಿm. ಆಹಾರನಾಳದ ಭಿತ್ತಿಯೇ ಇಟಿಜoಜeಡಿm. ಇವೆರಡರ ನಡುವೆ ಇರುವ ಕುಹರವೇ ದೇಹಾವಕಾಶ ಅಥವಾ ಅoeಟom. ಈ ದೇಹಾವಕಾಶದಲ್ಲಿ ಮದ್ಯದ ಪದರ mesoಜeಡಿm ಇರುವುದು.	

	ಚಪ್ಪಟೆಹುಳುಗಳಲ್ಲಿದೆಹದ ಹೊರ ಮತ್ತು ಒಳ ಪದರಗಳ ನಡುವಣ ಕುಹರವು ಮೀಸೋಡರ್ಮನಿಂದಾದ ಪಾರಂಕೈಮಾ ಅಂಗಾಂಶದಿಂದ ತುಂಬಿ ಹೋಗಿದೆ. ಹಾಗಾಗಿ ಒಂದು ನಿರ್ದಿಷ್ಟ ಅoeಟom ಕಾಣಬರುವುದಿಲ್ಲ. ಇದನ್ನು 'ದೇಹಾವಕಾಶ ರಹಿತ (ಂಛಿoeಟom) ಗುಂಪಿಗೆ ಸೇರಿಸಬಹುದು.

	ದುಂಡು ಹುಳುಗಳಲ್ಲಿ ಭ್ರೂಣಾವಸ್ಥೆಯಲ್ಲಿ ಉಂಟಾದ ನೆನೆಪೆಂಡುಕುಳಿ (ಃಟಚಿsಣoಛಿoeಟ) ಯಾವ ಮಾರ್ಪಾಟುಗಳನ್ನು ಹೊಂದದೆ ಹಾಗೆಯೇ ಉಳಿಯುತ್ತದೆ. ಈ ಕುಳಿಯೊಳಗೆ ದೇಹದ ಎಲ್ಲಾ ಅಂಗವ್ಯವಸ್ಥೆಯೂ ಜೋಡಣೆಯಾಗುವುದು. ಹೀಗೆ ರೂಪುಗೊಂಡ ದೇಹಾವಕಾಶವನ್ನು ಮಿಥ್ಯಾದೇಹಾವಕಾಶ (Pseuಜoಛಿoeಟom) ಎನ್ನಲಾಗಿದೆ.

	ಮಣ್ಣು ಹುಳುವಿನ ವಂಶ ವಲಯವಂಶಕಗಳಿಂದ ಹಿಡಿದು ಅದರಿಂದ ವಿಕಾಸಗೊಂಡ ಉಳಿದೆಲ್ಲಾ ಪ್ರಾಣಿಗಳಲ್ಲಿ ದೇಹಾವಕಾಶವು ಮದ್ಯಪದರವಾದ mesoಜeಡಿm ಭ್ರೂಣ ಬೆಳವಣಿಗೆಯಲ್ಲಿ ಸೀಳಿಕೊಂಡು ಕುಹರವೇರ್ಪಡುತ್ತದೆ. ಹಾಗಾಗಿ ಇದು ತನ್ನದೇ ಆದ ಹೊರ ಮತ್ತು ಒಳ ನಡುವಣ ಪದರಗಳಿಂದಾವೃತವಾಗುತ್ತದೆ. ಹೊರ ನಡುವಣ ಪದರವು ಆಹಾರನಾಳದ ಹೊರಭಾಗಕ್ಕೆ ಅಂಟಿಕೊಂಡಂತೆ ರೂಪುಗೊಳ್ಳುತ್ತದೆ. ದೇಹ ಭಿತ್ತಿಗೆ ಅಟ್ಟಿಕೊಂಡ ಹೊರ ನಡುವಣ ಪದರವನ್ನು ವಿಸರಲ್ ಅಥವಾ ಸ್ಪ್ಲಾಂಕ್ನಿಕ್ ಮೀಸೋಡರ್ಮ್ ಎಂದು ಕರೆಯುತ್ತೇವೆ. ಹೀಗೆ ಮಧ್ಯ ಪದರದ ಸೀಳುವಿಕೆಯಿಂದ ರೂಪುಗೊಂಡ ಸೀಲೇಮ್/ಕುಹರವೇ ನೈಜ ದೇಹಾವಕಾಶ.

	ಸಂದಿಪದಿ ಮತ್ತು ಮೃದ್ವಂಗಿಗಳಲ್ಲಿ ನೈಜ ದೇಹಾವಕಾಶವೇ ರೂಪುಗೊಂಡರೂ, ಅವುಗಳ ರಕ್ತ ಪರಿಚಲನಾ ಕ್ರಮದ ಮಾರ್ಪಾಟಿನಿಂದ ದೇಹಾವಕಾಶವೂ ವ್ಯತ್ಯಯವಾಗಿದೆ. ಈ ಜೀವಿಗಳಲ್ಲಿ ತೆರೆದ ರಕ್ತ ಪರಿಚಲನೆ (open circulating system) ಇರುವುದರಿಂದ ರಕ್ತವೂ ದೇಹಾವಕಾಶಕ್ಕೂ ಪಸರಿಸುತ್ತದೆ. ಆದ್ದರಿಂದ ಇಲ್ಲಿ ನೈಜದೇಹಾವಕಾಶವೂ ಹೀಮೋಸೀಲ್ (Haemocoel) ಎಂದು ಪರಿಗಣಿಸಲಾಗಿದೆ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ